Who We Are
ಈಗ ಸಹಾಯ

14ರೂಪಿಸಿದವರ ಬಗ್ಗೆ

Reiner Endrios

ಇದು ನನ್ನ ನಿಜವಾದ ಹೆಸರಲ್ಲ. ನನ್ನೊಳಗೆ ಉಳಿದುಕೊಂಡ ಭಾಗಕ್ಕೆ ನಾನಿಟ್ಟ ಹೆಸರು.

ನಾನು ಇತರರಿಗಿಂತ ಭಿನ್ನ ಎಂದು ಅರಿತ ದಿನ ನನ್ನ ಇಡೀ ಬದುಕು ತಿರುಗಿಹೋಯಿತು. ಅದು ತಪ್ಪು ಎಂದು ಭಾವಿಸಿದ್ದರಿಂದ ನನಗೆ ನಾಚಿಕೆಯಾಯಿತು. ನಂತರ ನಾನು ತಿಳಿಯುತ್ತಾ ಹೋದೆ, ತಿಳಿಯುತ್ತಾ ಹೋದೆ, ತಿಳಿಯುತ್ತಾ ಹೋದೆ.

ಆದರೆ ಯಾರಿಗಾದರೂ ಹೇಳಲು ನನಗೆ ಯಾವಾಗಲೂ ಭಯ. ನನ್ನ ಬಗೆಗಿನ ಸತ್ಯಕ್ಕೆ ಏನಾದರೂ ಹತ್ತಿರ ಬಂದರೆ ಉಸಿರೇ ನಿಂತುಹೋಗುವಷ್ಟು, ಯೋಚನೆಯೇ ನಿಲ್ಲುವಷ್ಟು ಭಯ.

ಕೊನೆಗೂ ಮನಸ್ಸು ಬಿಚ್ಚಿ ಮಾತನಾಡಬಹುದು ಎಂಬ ಆಸೆಯಿಂದ ನಾನು ಕಾಲೇಜಿಗೆ ಬಂದೆ. ಜನ ಅರ್ಥಮಾಡಿಕೊಳ್ಳುತ್ತಾರೆ ಎನ್ನುವುದು ಕೇವಲ ನನ್ನ ಊಹೆ ಎಂದು ಕಂಡುಕೊಂಡೆ. ಅದನ್ನು ಗೇಲಿ ಮಾಡಿ ನಗುವುದನ್ನು ಕೇಳಿದೆ. ಅದನ್ನು ಒಂದು ಟ್ರೆಂಡ್ ಎನ್ನುವುದನ್ನು ಕೇಳಿದೆ. ಅದನ್ನು ರೋಗ ಎನ್ನುವುದನ್ನೂ ಕೇಳಿದೆ. ಅದು ನನ್ನನ್ನು ಮುರಿದುಹಾಕಿತು, ಆದರೂ ನಾನು ನನ್ನನ್ನು ಕೈಬಿಡಲಿಲ್ಲ.

ನಾನು ಜನರಿಗೆ ಹೇಳತೊಡಗಿದಾಗ, ನಾನು ನಿರೀಕ್ಷಿಸಿದ್ದಕ್ಕಿಂತ ಬೇರೆಯೇ ಆಯಿತು. ಎಂದೂ ಒಪ್ಪಿಕೊಳ್ಳುವುದಿಲ್ಲ ಎಂದು ಖಚಿತವಾಗಿದ್ದವರೇ ನನಗೆ ಅತಿ ಹೆಚ್ಚು ಬೆಂಬಲ ನೀಡಿದರು. ನಾನು ಅತಿ ಹೆಚ್ಚು ನಂಬಿದ್ದವರಲ್ಲಿ ಕೆಲವರು ದೂರವಾದರು.

ನೋವಾಯಿತು. ಕಷ್ಟದ ಸಮಯದಲ್ಲಿ ಬಿಟ್ಟುಹೋಗಲು ನಿರಾಕರಿಸಿದ ಸ್ನೇಹಿತರನ್ನೂ ಕುಟುಂಬವನ್ನೂ ಪ್ರೀತಿಯಿಂದ ಜೋಪಾನ ಮಾಡಲು ಅದು ನನಗೆ ಕಲಿಸಿತು. ಲೋಕ ಹೇಳುವುದಕ್ಕಿಂತ ಹೆಚ್ಚು ಒಳ್ಳೆಯತನ ನನಗೆ ಜನರಲ್ಲಿ ಕಾಣುವುದರಿಂದ ನಾನು ಅವರಿಗೆ ಲೆಕ್ಕವಿಲ್ಲದಷ್ಟು ಅವಕಾಶ ಕೊಡುತ್ತೇನೆ. ನಾನು ಸಂತನೇನಲ್ಲ. ನನ್ನಿಂದಲೂ ತಪ್ಪಾಗಿದೆ, ನನ್ನನ್ನು ಕ್ಷಮಿಸಲಾಗಿದೆ, ಅಲ್ಲಿಂದಲೇ ನಾನು ಕಲಿತದ್ದು.

ಇದು ಇನ್ನೂ ಆಯ್ಕೆ ಎಂದು ನಂಬುವವರು ಪುರಾವೆಗಳನ್ನು ಓದಲು ಸಿದ್ಧರಿದ್ದರೆ ಅವರಿಗಾಗಿ ನಾನು ಈ ಜಾಗವನ್ನು ಕಟ್ಟಿದ್ದೇನೆ. ಕಷ್ಟದಲ್ಲಿರುವ ಯಾರಿಗಾದರೂ, ಅಥವಾ ಕಷ್ಟದಲ್ಲಿರುವ ಒಬ್ಬರನ್ನು ಪ್ರೀತಿಸಲು ಪ್ರಯತ್ನಿಸುತ್ತಿರುವವರಿಗಾಗಿಯೂ ಕಟ್ಟಿದ್ದೇನೆ. ಇಲ್ಲಿ ನಿಮಗೆ ಸ್ವಾಗತ. ನನ್ನಲ್ಲಿ ಯಾರ ಬಗ್ಗೆಯೂ ದ್ವೇಷವಿಲ್ಲ. ಪ್ರೀತಿಸಿದ್ದಕ್ಕಾಗಿ ಯಾರೂ ಯಾರ ಕೈಗೂ ದ್ವೇಷವನ್ನು ಕೊಡಬಾರದು ಎಂಬುದಷ್ಟೇ ನನ್ನ ಕೋರಿಕೆ.

ನನ್ನ ಪೂರ್ಣ ಕಥೆಯನ್ನು ಓದಿ

Reiner